ಕ್ಯಾಶ್ಮೀಯರ್

ಕಾಶ್ಮೀರ, ಟಿಬೆಟ್ ಮೊದಲಾದ ಹಿಮಾಲಯ ಪ್ರದೇಶಗಳ ಮೇಕೆಗಳ ಉಣ್ಣೆಯಿಂದ ತಯಾರಿಸಿದ ಬಟ್ಟೆ. ಕಾಶ್ಮೀರಿಗಳು ಅನೇಕ ಶತಮಾನಗಳಿಂದಲೂ ಈ ಹೆಸರಿನ ಶಾಲುಗಳನ್ನು ತಯಾರಿಸುತ್ತಿದ್ದಾರೆ. ಇವು ವಸ್ತ್ರಗಳಲ್ಲೆಲ್ಲ ಅತ್ಯುತ್ತಮವಾದವು ಹಾಗೂ ಪ್ಯಾಷ್ಮಿನ ಉಣ್ಣೆಯಿಂದ ತಯಾರಾದ ಕೈನೂಲಿನ ಕೈಮಗ್ಗದ ಬಟ್ಟೆಗಳು. ನೇಯ್ಗೆಯ ಕ್ರಮ ಸಾದಾ ಅಥವಾ ಮೂಲೆ ನೇಯ್ಗೆ. ಶಾಲನ್ನು ಒಂದು ಹೆಚ್ಚಿನ ವರ್ಣರಂಜಿತ, ಅತ್ಯಾಕರ್ಷಕ, ಸುಂದರ ಚಿತ್ರಗಳಿಂದ, ವಿಶೇಷವಾಗಿ ಕಸೂತಿ ಹೊಲಿಗೆಯ ವೈವಿಧ್ಯದಿಂದ ಶೃಂಗರಿಸುತ್ತಾರೆ. ಹಾಸಿನಲ್ಲಿ ಎರಡು ದಾರಗಳು, ಹೊಕ್ಕಿನಲ್ಲಿ ಒಂದು ದಾರ ಎಂಬೀ ಕ್ರಮದಲ್ಲಿ ಸಾಮಾನ್ಯವಾಗಿ ನೇಯ್ದಿರುತ್ತಾರೆ. ಶಾಲುಗಳನ್ನು ಗೌನುಗಳಿಗೂ ಕೆಲವು ಧಾರಣವಸ್ತ್ರಗಳಿಗೂ ಉಪಯೋಗಿಸುತ್ತಾರೆ.						 (ವಿ.ಎಸ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ